Home Bengaluru ಬೆಂಗಳೂರಿನಲ್ಲಿ ನೀರಿನ ಅದಾಲತ್

ಬೆಂಗಳೂರಿನಲ್ಲಿ ನೀರಿನ ಅದಾಲತ್

0

ಬೆಂಗಳೂರು, ಮಾರ್ಚ್ 6: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಪೂರ್ವ-1-1, ಪೂರ್ವ-2-1, ಆಗ್ನೇಯ -1, ಆಗ್ನೇಯ -4, ಪಶ್ಚಿಮ -1-1, ಪಶ್ಚಿಮ -2-1, ವಾಯುವ್ಯ – 1, ವಾಯುವ್ಯ – 3, ಕೇಂದ್ರ-1-1 ಈಶಾನ್ಯ – 1 ಮತ್ತು ಉತ್ತರ-1-1, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮಾರ್ಚ್ 7ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ ನೀರಿನ ಅದಾಲತ್‍ನ್ನು ಹಮ್ಮಿಕೊಳ್ಳಲಾಗಿದೆ.

ಎ.ಇ.ಸಿ.ಎಸ್ – 1 ಮತ್ತು 2, ಹೂಡಿ, ಹೆಚ್.ಬಿಆರ್.ಲೇಔಟ್, ಕಾಚರಕನಹಳ್ಳಿ, ಕಲ್ಯಾಣನಗರ, ಜೀವನ್ ಭೀಮಾನಗರ, ಹೆಚ್.ಎ.ಎಲ್ 2ನೇ ಹಂತ, ಇಂದಿರಾನಗರ, ಬೈಯ್ಯಪ್ಪನಹಳ್ಳಿ, ಸಿ.ವಿ.ರಾಮನ್‍ನಗರ, ಸದಾನಂದನಗರ, ಮಾಗಡಿ ರಸ್ತೆ – 1,2, ಹೊಸಹಳ್ಳಿ ಪಂಪ್ ಹೌಸ್, ಮೈಸೂರು ರಸ್ತೆ, ಕೆಂಗೇರಿ, ಐಡಿಯಲ್ ಹೋಮ್ಸ್, ಬಿ.ಜಿ.ಎಂ.ಎಲ್ ಲೇಔಟ್, ಆರ್.ಆರ್.ನಗರ, ಕೇತಮಾರನಹಳ್ಳಿ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ-1, 2, ನಂದಿನಿ ಲೇಔಟ್ – 1, ಎಂ.ಇ.ಐ. ಲೇಔಟ್-1 ಮತ್ತು 2 ಬಾಹುಬಲಿನಗರ, ಹೈಗ್ರೌಂಡ್ಸ್ (ಹೆಚ್.ಜಿ.ಆರ್), ಕೋಲ್ಸ್ ಪಾರ್ಕ್, ಮಿಲ್ಲರ್ಸ್ ರಸ್ತೆ, ಮಲ್ಲೇಶ್ವರಂ – 1 ಮತ್ತು 2, ಶ್ರೀರಾಂಪುರ, ಯಶವಂತಪುರ- 1 ಮತ್ತು 2, ಭಾಷ್ಯಂಪಾರ್ಕ್, ಸಹಕಾರ ನಗರ, ಜಕ್ಕೂರು, ಕೆಂಪಾಪುರ (ಕಾಫಿ ಬೋರ್ಡ್ ಲೇಔಟ್)  ಸೇವಾ ಠಾಣೆಗಳಲ್ಲಿ ಅದಾಲತ್ ನಡೆಯಲಿದೆ.

ಸಾರ್ವಜನಿಕರು ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ ಮಂಡಳಿಯ 24/7 ದೂರು ನಿರ್ವಹಣಾ ಕೇಂದ್ರದ ಸಹಾಯವಾಣಿ 1916ಗೆ ಕರೆ ಮಾಡಿ ದೂರುಗಳನ್ನು ದಾಖಲಿಸಬಹುದು. ಹಾಗೂ ವಾಟ್ಸ್‍ಆಫ್ ಸಂಖ್ಯೆ 8762228888 ಸಂದೇಶದ ಮೂಲಕ ದೂರನ್ನು ಸಲ್ಲಿಸಬಹುದಾಗಿದೆ ಎಂದು ಬೆಂಗಳೂರು ಜಲಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous articleSPARSH Hospital signs MoU with GE HealthCare to AdvanceClinical Care in India
Next articleದೇಶದ ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಅಪಾರ – ಅಚ್ಚುತ್ ಗೌಡಫಿಡಿಲಿಟಸ್ ಕಾರ್ಪ್ ವತಿಯಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ

LEAVE A REPLY

Please enter your comment!
Please enter your name here