Home Bengaluru ಜೆಟ್‌ಸಿಂಥೆಸಿಸ್‌ನ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 2 ಬೆಂಗಳೂರಿನಲ್ಲಿ ಶುಭಾರಂಭ

ಜೆಟ್‌ಸಿಂಥೆಸಿಸ್‌ನ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ ಸೀಸನ್ 2 ಬೆಂಗಳೂರಿನಲ್ಲಿ ಶುಭಾರಂಭ

ಜಿಇಪಿಎಲ್ ಸೀಸನ್ 2ರ ಮೊದಲ ದಿನ ನಡೆದಿವೆ 4 ರೋಚಕ ಪಂದ್ಯಗಳು ಸ್ಥಳೀಯ ತಂಡ ಬೆಂಗಳೂರು ಬ್ಯಾಡ್ಜರ್ಸ್ ಮತ್ತು ಮುಂಬೈ ಗ್ರಿಜ್ಲೀಸ್‌ ಗೆ ನಡುವೆ ಎರಡು ಪಂದ್ಯಗಳಲ್ಲಿ ತೀವ್ರ ಹಣಾಹಣಿ

0

ಬೆಂಗಳೂರುಏಪ್ರಿಲ್ 27: ಜಾಗತಿಕ ಡಿಜಿಟಲ್ ಮನರಂಜನೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೆಸಿಸ್‌ ಸಂಸ್ಥೆಯು ಆಯೋಜಿಸಿರುವ ಗ್ಲೋಬಲ್ ಇ-ಕ್ರಿಕೆಟ್ ಪ್ರೀಮಿಯರ್ ಲೀಗ್ (ಜಿಇಪಿಎಲ್) ಸೀಸನ್ 2 ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಈ ಲೀಗ್‌ ನ ರಾಷ್ಟ್ರೀಯ ಉದ್ಘಾಟನಾ ಕಾರ್ಯಕ್ರಮ ಗಾರ್ಡನ್ ಸಿಟಿಯಲ್ಲಿ ಆಯೋಜನೆಗೊಂಡಿದೆ. ಜೆಟ್‌ಸಿಂಥೆಸಿಸ್‌ ಸಂಸ್ಥೆಯು ರೂಪಿಸಿರುವ ಜಿಇಪಿಎಲ್ ಇ-ಕ್ರಿಕೆಟ್ ಪಂದ್ಯಾವಳಿಯು ಭಾರತದ ಅತ್ಯಂದ ಸಂಘಟಿತ ಹಾಗೂ ಫ್ರಾಂಚೈಸ್ -ನೇತೃತ್ವದ ಇ- ಸ್ಪೋರ್ಟ್ಸ್ ಪಂದ್ಯಾವಳಿಗಳಲ್ಲಿ ಒಂದಾಗಿ ವೇಗವಾಗಿ ಮತ್ತು ದೊಡ್ಡದಾಗಿ ಬೆಳೆದಿದೆ. ಈ ಪಂದ್ಯಾವಳಿಯು ಭಾರತದ ಕ್ರಿಕೆಟ್ ಹುಮ್ಮಸ್ಸು ಮತ್ತು ಸ್ಪರ್ಧಾತ್ಮಕ ಗೇಮಿಂಗ್‌ ನ ರೋಚಕತೆಯನ್ನು ಒಟ್ಟುಗೂಡಿಸಿದೆ.

ಈ ಸೀಸನ್‌ನಲ್ಲಿ ಆರು ನಗರ ಆಧರಿತ ಫ್ರಾಂಚೈಸಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದುಪ್ರತಿಯೊಂದು ತಂಡವೂ ಭಾರತದ ಉದ್ಯಮ ಮತ್ತು ಮನರಂಜನಾ ಕ್ಷೇತ್ರದ ಪ್ರಮುಖರ ಮಾಲೀಕತ್ವವನ್ನು ಹೊಂದಿದೆ, ಪಂದ್ಯಾವಳಿಯ ಆರು ತಂಡಗಳು ಹೀಗಿವೆ:

●        ಮುಂಬೈ ಗ್ರಿಜ್ಲೀಸ್: ಉದ್ಯಮಿ ಮತ್ತು ಸಮಾಜಸೇವಕಿ, ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರ ಮಾಲೀಕತ್ವದ ತಂಡ.

●        ದೆಹಲಿ ಶಾರ್ಕ್ಸ್: ಲೆನ್ಸ್‌ ಕಾರ್ಟ್‌ ನ ಸಂಸ್ಥಾಪಕ ಮತ್ತು ಸಿಇಓ ಶ್ರೀ ಪೀಯೂಷ್ ಬನ್ಸಲ್ ಈ ತಂಡದ ಮಾಲೀಕತ್ವ ಹೊಂದಿದ್ದಾರೆ.

●        ಬೆಂಗಳೂರು ಬ್ಯಾಡ್ಜರ್ಸ್: ಜೀರೋಧಾ & ಟ್ರೂ ಬೀಕನ್ ಸಹ-ಸಂಸ್ಥಾಪಕರಾಗಿರುವ ಶ್ರೀ ನಿಖಿಲ್ ಕಾಮತ್, ಕ್ಯೂರ್‌ಫುಡ್ಸ್ ಸಂಸ್ಥಾಪಕ ಶ್ರೀ ಅಂಕಿತ್ ನಾಗೋರಿ ಮತ್ತು ಆಕ್ಸೆಲ್ ಇಂಡಿಯಾದ ಸಂಸ್ಥಾಪಕ ಪಾಲುದಾರ ಶ್ರೀ ಪ್ರಶಾಂತ್ ಪ್ರಕಾಶ್ ಈ ತಂಡದ ಸಹ ಮಾಲೀಕತ್ವ ಹೊಂದಿದ್ದಾರೆ.

●        ಚೆನ್ನೈ ಫಾಲ್ಕನ್ಸ್ಶ್ರೀ ಗೋಪಾಲ್ ಶ್ರೀನಿವಾಸನ್ (ಟಿವಿಎಸ್ ಕ್ಯಾಪಿಟಲ್ ಫಂಡ್ಸ್ ಅಧ್ಯಕ್ಷ), ಶ್ರೀ ಮಧುಸೂದನನ್ ಆರ್ (ಯಾಪ್ ಸಂಸ್ಥಾಪಕ), ಮತ್ತು ಶ್ರೀ ಅರ್ಜುನ್ ಸಂತಾನಕೃಷ್ಣನ್ (ಹೂಡಿಕೆದಾರ & ಉದ್ಯಮಿ) ಸಹ-ಮಾಲೀಕತ್ವದ ತಂಡ.

●        ಹೈದರಾಬಾದ್ ರೈನೋಸ್ಎಲ್‌ಎನ್‌ಬಿ ಗ್ರೂಪ್‌ನ ನಿರ್ದೇಶಕರಾದ ಶ್ರೀ ಅಮಿತ್ ಮೆಹತಾ ಮಾಲೀಕತ್ವದ ತಂಡ.

●        ಪುಣೆ ಸ್ಟಾಲಿಯನ್ಸ್: ನಟ ಮತ್ತು ಹೂಡಿಕೆದಾರರಾದ ಶ್ರೀ ಸುನಿಲ್ ಶೆಟ್ಟಿ ಮಾಲೀಕತ್ವದ ತಂಡ.

ಉದ್ಘಾಟನಾ ಸಂದರ್ಭದಲ್ಲಿ ಲೀಗ್‌ ನ ಆಯೋಜಕರಾದ ಜೆಟ್‌ಸಿಂಥೆಸಿಸ್ ಸಂಸ್ಥಾಪಕ ಮತ್ತು ಸಿಇಒ ಶ್ರೀ ರಾಜನ್ ನವಾನಿ, ಫ್ರಾಂಚೈಸಿ ಮಾಲೀಕರುಗಳಾದ ಸಾರಾ ತೆಂಡೂಲ್ಕರ್, ಶ್ರೀ ಪ್ರಶಾಂತ್ ಪ್ರಕಾಶ್, ಶ್ರೀ ಅಂಕಿತ್ ನಾಗೋರಿ, ಶ್ರೀ ಅಮಿತ್ ಮೆಹತಾ, ಮತ್ತು ಶ್ರೀ ಗೋಪಾಲ್ ಶ್ರೀನಿವಾಸನ್ ಉಪಸ್ಥಿತರಿದ್ದರು. ಭಾರತದ ಇ-ಸ್ಪೋರ್ಟ್ಸ್ ಕ್ಷೇತ್ರದ ಮೇಲೆ ಹೂಡಿಕೆದಾರರ ವಿಶ್ವಾಸ ಬೆಳೆಯುತ್ತಿರುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜೆಟ್‌ಸಿಂಥೆಸಿಸ್ ಸಂಸ್ಥಾಪಕ ಮತ್ತು ಸಿಇಓ ಶ್ರೀ ರಾಜನ್ ನವಾನಿ ಅವರು, “ಜಿಇಪಿಎಲ್ ಭಾರತದ ವೀಡಿಯೊ ಗೇಮಿಂಗ್ ಮತ್ತು ಕ್ರೀಡಾ ಸಂಸ್ಕೃತಿಗಳನ್ನು ಒಗ್ಗೂಡಿಸುವ ಸಂಘಟಿತ ಮತ್ತು ವಿಸ್ತರಿಸಬಹುದಾದ ವೇದಿಕೆಗಳನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಉತ್ತಮ ಪುರಾವೆಯಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಜಿಇಪಿಎಲ್ ನ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷ ತಂದಿದೆ. ದೇಶದ ಕೆಲವು ವಿಶ್ವಾಸಾರ್ಹ ಉದ್ಯಮಿಗಳ ಬೆಂಬಲದೊಂದಿಗೆ ರೂಪುಗೊಂಡಿರುವ ಜಿಇಪಿಎಲ್ ಸೀಸನ್ 2, ಇ-ಸ್ಪೋರ್ಟ್ಸ್ ಅನ್ನು ಮುಖ್ಯವಾಹಿನಿಗೆ ತೆಗೆದುಕೊಂಡು ಬರುವ ಮತ್ತು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾಗಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ,” ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇ-ಸ್ಪೋರ್ಟ್ಸ್ ಸಾಮರ್ಥ್ಯದ ಕುರಿತು ಮಾತನಾಡಿದ ಬೆಂಗಳೂರು ಬ್ಯಾಡ್ಜರ್ಸ್ ತಡದ ಸಹ-ಮಾಲೀಕರಾದ ಶ್ರೀ ಪ್ರಶಾಂತ್ ಪ್ರಕಾಶ್ ಅವರು, “ಜಿಇಪಿಎಲ್‌ ಗೆ ಇ- ಕ್ರಿಕೆಟ್‌ ನ ಧೋನಿ ಅಥವಾ ವಿರಾಟ್ ಕೊಹ್ಲಿಯಂತಹ ರಾಷ್ಟ್ರೀಯ ಬ್ರಾಂಡ್ ಗಳನ್ನು ಸೃಷ್ಟಿಸುವ ಸಾಮರ್ಥ್ಯವಿದೆ. ಅವರು ದೇಶದಾದ್ಯಂತ ಹೆಮ್ಮೆ ಮೂಡಿಸಬಲ್ಲರು, ಅನುಯಾಯಿಗಳನ್ನು ಹೊಂದಬಲ್ಲರು ಮತ್ತು ಜಾಗತಿಕ ಮನ್ನಣೆಯನ್ನು ಗಳಿಸಬಲ್ಲರು” ಎಂದರು.

ಬೆಂಗಳೂರಿನ ಸಾಂಸ್ಕೃತಿಕ ಪ್ರಸ್ತುತತೆಯ ಕುರಿತು ಮಾತನಾಡಿದ ಬೆಂಗಳೂರು ಬ್ಯಾಡ್ಜರ್ಸ್ ತಂಡದ ಮತ್ತೊಬ್ಬ ಸಹ-ಮಾಲೀಕ ಶ್ರೀ ಅಂಕಿತ್ ನಾಗೋರಿ ಅವರು, “ಬೆಂಗಳೂರು ಪ್ರತಿಭೆ, ತಂತ್ರಜ್ಞಾನ, ಮತ್ತು ಯುವ ಸಂಸ್ಕೃತಿಯ ಸಂಗಮವಾಗಿದೆ. ಇಲ್ಲಿನ ಇ- ಸ್ಪೋರ್ಟ್ಸ್ ತಂಡವನ್ನು ಬೆಂಬಲಿಸುವುದು ಸಹಜವಾಗಿಯೇ ಆನಂದ ನೀಡಿದೆ ಮತ್ತು ಇದು ಅಭಿಮಾನಿಗಳು ತೊಡಗಿಸಿಕೊಳ್ಳುವಿಕೆಯ ಭವಿಷ್ಯದ ಕ್ರೀಡೆಯಾಗಿದೆ” ಎಂದು ಹೇಳಿದರು.

ಹೂಡಿಕೆದಾರರ ದೃಷ್ಟಿಕೋನದಿಂದ ಮಾತನಾಡಿದ ಚೆನ್ನೈ ಫಾಲ್ಕನ್ಸ್‌ ನ ಸಹ-ಮಾಲೀಕ ಶ್ರೀ ಗೋಪಾಲ್ ಶ್ರೀನಿವಾಸನ್ ಅವರು, “ಜಿಇಪಿಎಲ್ ಭಾರತದಲ್ಲಿ ಸುಸ್ಥಿರ ಮತ್ತು ಹೂಡಿಕೆಗೆ ಯೋಗ್ಯವಾದ ಇ- ಸ್ಪೋರ್ಟ್ಸ್ ಪರಿಸರವನ್ನು ನಿರ್ಮಿಸುವ ದಿಕ್ಕಿನಲ್ಲಿ ಒಂದು ಅರ್ಥಪೂರ್ಣ ಹೆಜ್ಜೆಯಾಗಿದೆ. ಲೀಗ್‌ ನ ಸ್ವರೂಪ ಮತ್ತು ಭಾಗವಹಿಸುವಿಕೆಯ ಗುಣಮಟ್ಟವು ಇದನ್ನು ವ್ಯಾಪಾರ ಮತ್ತು ಪ್ರತಿಭೆಗಳ ಬೆಳವಣಿಗೆಗೆ ಒಂದು ಅತ್ಯುತ್ತಮ ವೇದಿಕೆಯನ್ನಾಗಿಸಲಿದೆ” ಎಂದು ಹೇಳಿದರು.

ಡಿಜಿಟಲ್ ಫಸ್ಟ್ ಉದ್ಯಮಗಳನ್ನು ದೀರ್ಘಕಾಲ ಬೆಂಬಲಿಸಿರುವ ಪರಿಣತಿ ಹೊಂದಿರುವ ಹೈದರಾಬಾದ್ ರೈನೋಸ್‌ ನ ಮಾಲೀಕ ಶ್ರೀ ಅಮಿತ್ ಮೆಹತಾ ಅವರು ಮಾತನಾಡಿ, “ನಾನು ಯಾವಾಗಲೂ ಯುವ ಧ್ವನಿಗಳನ್ನು ಬೆಳೆಸುವ ವೇದಿಕೆಗಳಲ್ಲಿ ಜಾಸ್ತಿ ನಂಬಿಕೆ ಇಡುತ್ತೇನೆ. ಜಿಇಪಿಎಲ್ ಉದಯೋನ್ಮುಖ ಇ- ಸ್ಪೋರ್ಟ್ಸ್ ಕ್ರೀಡಾಪಟುಗಳಿಗೆ ಅತ್ಯುತ್ತಮ ಅವಕಾಶ, ರಿವಾರ್ಡ್, ಮತ್ತು ಸಮುದಾಯದ ಮನ್ನಣೆ ಪಡೆಯುವ ಅವಕಾಶವನ್ನು ನೀಡುತ್ತದೆ” ಎಂದು ಹೇಳಿದರು.

ಜಿಇಪಿಎಲ್‌ ನ ಸಿಇಓ ಶ್ರೀ ರೋಹಿತ್ ಪೊಟ್‌ಫೋಡೆ ಅವರು ಮಾತನಾಡಿ, “ಜಿಇಪಿಎಲ್ ಸೀಸನ್ 2 ರ ಉದ್ಘಾಟನಾ ದಿನದಂದು ನಾವು ಕಂಡ ಉತ್ಸಾಹ ಮತ್ತು ಹುಮ್ಮಸ್ಸು ನಿಜವಾಗಿಯೂ ಅದ್ಭುತವಾಗಿತ್ತು. ಭಾರಿ ಹುಮ್ಮಸ್ಸಿನ ವಾತಾವರಣದಿಂದ ಹಿಡಿದು ಅಭಿಮಾನಿಗಳು, ಆಟಗಾರರು, ಮತ್ತು ತಂಡದ ಮಾಲೀಕರಿಂದ ಬಂದ ಅದ್ಭುತ ಪ್ರತಿಕ್ರಿಯೆಯವರೆಗೆ ಎಲ್ಲವೂ ಅಪ್ರತಿಮ ಅನುಭವಾಗಿತ್ತು. ಈ ಲೀಗ್ ಎಷ್ಟು ದೂರ ಬಂದಿದೆ ಎಂಬುದನ್ನು ಈ ಸಂಭ್ರಮ ನೆನಪಿಸಿತು. ಈ ಸೀಸನ್ ಇ- ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಸಾಗಲಿದೆ ಮತ್ತು ಇಂದಿನ ಉದ್ಘಾಟನಾ ಕಾರ್ಯಕ್ರಮವು ಮುಂದಿನ ಹೆಜ್ಜೆಗಳಿಗೆ ಭಾರಿ ಸ್ಫೂರ್ತಿ ನೀಡಿದೆ. ಮುಂದಿನ ಅಚ್ಚರಿಗಳಿಗೆ ನಾವು ಉತ್ಸುಕರಾಗಿ ಕಾಯುತ್ತಿದ್ದೇವೆ” ಎಂದು ಹೇಳಿದರು.

ಜಿಇಪಿಎಲ್ ಸೀಸನ್ 2 ರ ಮೊದಲ ದಿನ 4 ರೋಚಕ ಪಂದ್ಯಗಳು ನಡೆದುವು. ಸ್ಥಳೀಯ ತಂಡ ಬೆಂಗಳೂರು ಬ್ಯಾಡ್ಜರ್ಸ್ ಮತ್ತು ಮುಂಬೈ ಗ್ರಿಜ್ಲೀಸ್‌ ಮಧ್ಯೆ ಎರಡು ರೋಚಕ ಪಂದ್ಯಗಳು ನಡೆದುವು. ಈ ಟೂರ್ನಮೆಂಟ್ ಜಿಯೋಹಾಟ್‌ಸ್ಟಾರ್‌ ನಲ್ಲಿ ಲೈವ್ ಸ್ಟ್ರೀಮ್ ಆಗಲಿದ್ದು, ಸ್ಟಾರ್ ಸ್ಪೋರ್ಟ್ಸ್‌ ನಲ್ಲಿ ದೇಶಾದ್ಯಂತ ಪ್ರಸಾರವಾಗುತ್ತಿದೆ. ಈ ಮೂಲಕ ಇ-ಕ್ರಿಕೆಟ್‌ ನ ಖುಷಿಯಲ್ಲಿ ಭಾರತದಾದ್ಯಂತ ಇರುವ ಲಕ್ಷಾಂತರ ಅಭಿಮಾನಿಗಳಿಗೆ ತಲುಪಿಸಲಾಗುತ್ತದೆ.

ಜಿಇಪಿಎಲ್ ಸೀಸನ್ 2 ಈ ಲೀಗ್‌ ನ ಅಭಿವೃದ್ಧಿ ಪಥದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಸೀಸನ್ 1 ರಲ್ಲಿ 2 ಲಕ್ಷ ಆಟಗಾರರ ನೋಂದಣಿ ಆಗಿದ್ದು, ಸೀಸನ್ 2 ಈ ಸಂಖ್ಯೆ 9.1 ಲಕ್ಷಕ್ಕೆ ಏರಿಕೆಯಾಗಿದೆ. ಒಟ್ಟಾರೆ ಆಟಗಾರರ ಭಾಗವಹಿಸುವಿಕೆ ಐದು ಪಟ್ಟು ಏರಿಕೆಯಾಗಿದೆ. ಈ ಆವೃತ್ತಿಯು ರಿಯಲ್ ಕ್ರಿಕೆಟ್ 24 ರಿಂದ ಬೆಂಬಲದಿಂದ ನಡೆಯಲಿದ್ದು, ಗುಣಮಟ್ಟದ ಪ್ರತಿಭೆಗಳಿಗೆ ಅವಕಾಶ ಕೊಡಲಿದೆ ಮತ್ತು ಈ ವಿಭಾಗದಲ್ಲಿ ಹೊಸ ಮಾನದಂಡವನ್ನು ಹಾಕಿಕೊಡಲಿದೆ.

ಈ ಸೀಸನ್ ನಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿದೆ. ಒಟ್ಟು ಬಹುಮಾನದ ಮೊತ್ತವು ₹2.51 ಕೋಟಿಯಿಂದ ₹3.05 ಕೋಟಿಗೆ ಏರಿಕೆಯಾಗಿದೆ. ಜಿಇಪಿಎಲ್ ತನ್ನ ಆಕರ್ಷಕ ಗೇಮ್‌ಪ್ಲೇ ಮತ್ತು ಫ್ರಾಂಚೈಸ್ ಆಧರಿತ ತಂಡದ ಸ್ವರೂಪದ ಮೂಲಕ ಸಾಂಪ್ರದಾಯಿಕ ಕ್ರಿಕೆಟ್ ಮತ್ತು ಅತ್ಯಾಧುನಿಕ ಇ-ಸ್ಪೋರ್ಟ್ಸ್ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡುತ್ತಿದೆ.

Previous articleAirtel announces new plans to revolutionize International Roaming (IR) experience
Next articleApollo Cancer Centres Launches ‘ColFit’, A Comprehensive Colorectal Cancer Screening Program Amidst Rising Cases

LEAVE A REPLY

Please enter your comment!
Please enter your name here