ಬೆಂಗಳೊರು: ಶ್ರೀ ಮಂತ್ರಾಲಯ ಕ್ಷೇತ್ರದಂತೆ ಬೆಂಗಳೂರಿನ ಜಯನಗರದ 5ನೇ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿಯೂ ಶ್ರೀ ಗುರು ರಾಯರ 353ನೇ ಆರಾಧನಾ ಮಹೋತ್ಸವದ, ರಾಯರ ಬೃಂದಾವನಕ್ಕೆ ನವರತ್ನ ಕವಚದ ಅಲಂಕಾರ ಮತ್ತು ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 353ನೇ “ಆರಾಧನಾ”. ಈ ಸಪ್ತರಾತ್ರೋತ್ಸವವನ್ನು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಆಗಸ್ಟ್ 18ರಂದು ಕಾಣಿಯೂರು ಮಠಾಧೀಶರಾದ ಪರಮಪೂಜ್ಯ ಶ್ರೀ 108 ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರಿಂದ ಸಪ್ತರಾತ್ರೋತ್ಸವದ ಉದ್ಘಾಟನೆ, ಗೋಪೂಜೆ, ಧನ-ಧಾನ್ಯ ಪೂಜೆ ನೆರೆವೇರಿತು.
ಈ ಸಂದರ್ಭದಲ್ಲಿ ಸುಧಾ ಮೂರ್ತಿಯವರು ಆಗಮಿಸಿ ಸಂಕಲ್ಪ ದೊಂದಿಗೆ ಗುರುರಾಜರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಭಕ್ತರಿಗಾಗಿ ಅಚ್ಚುಕಟ್ಟಾದ ವ್ಯವಸ್ಥೆಯೊಂದಿಗೆ ಆರಾಧನಾ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಶ್ರೀ ನಂದ ಕಿಶೋರ್ ಆಚಾರ್ಯರು ತಿಳಿಸಿದರು.
.