ಬೆಂಗಳೂರು ನವೆಂಬರ್ 15: ವೃಂದಾವನದ ನಿವಾಸಿಗಳನ್ನು ಇಂದ್ರನ ಕೋಪದಿಂದ ರಕ್ಷಿಸಲು ಪರಮಾತ್ಮ ಶ್ರೀ ಕೃಷ್ಣನು ಗೋವರ್ಧನ ಬೆಟ್ಟವನ್ನು ಎತ್ತಿದ ನೆನಪಿಗಾಗಿ ಕಾರ್ತಿಕ ಮಾಸದಲ್ಲಿ (ಅಕ್ಟೋಬರ್ – ನವೆಂಬರ್) ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ವೃಂದಾವನದ ನಿವಾಸಿಗಳು ಇಂದ್ರಯಜ್ಞಕ್ಕೆ ಸಿದ್ಧರಾಗುತ್ತಿರುವುದನ್ನು ನೋಡಿದ
ಪರಮಾತ್ಮನಾದ ಶ್ರೀಕೃಷ್ಣನು ಇಂದ್ರನ ಪೂಜೆಯನ್ನು ಬಿಟ್ಟು ಗೋವರ್ಧನ ಬೆಟ್ಟವನ್ನು ಪೂಜಿಸುವಂತೆ ಸೂಚಿಸಿದನು. ಇದನ್ನು ತಿಳಿದ ಇಂದ್ರನು ಕೋಪಗೊಂಡು ವೃಂದಾವನದ ಮೇಲೆ ವಿನಾಶಕಾರಿ ಮಳೆಯನ್ನು ಸುರಿಸಲಾರಂಭಿಸಿದನು. ಆಗ ಕೃಷ್ಣನು ತನ್ನ ಕಿರುಬೆರಳಿನಿಂದ ಗೋವರ್ಧನ ಬೆಟ್ಟವನ್ನು ಎತ್ತಿಕೊಂಡನು ಮತ್ತು ಅದು ವೃಂದಾವನದ ಎಲ್ಲಾ ನಿವಾಸಿಗಳಿಗೆ ಆಶ್ರಯವನ್ನು ನೀಡಿತು. ನಂತರ ಇಂದ್ರನಿಗೆ ತನ್ನ ಅಪರಾಧದ ಅರಿವಾಗಿ ಕೃಷ್ಣನಲ್ಲಿ ಕ್ಷಮೆಯಾಚಿಸಿದನು. ಹೀಗೆ ಪರಮಾತ್ಮನಿಗೆ ಶರಣಾದ ಮತ್ತು ಭಕ್ತಿ ಸೇವೆಯಲ್ಲಿ ತೊಡಗಿರುವ ಭಕ್ತನು ಎಲ್ಲಾ ಬಾಧ್ಯತೆಗಳಿಂದ ಮುಕ್ತನಾಗಿರುತ್ತಾನೆ ಮತ್ತು ಭೌತಿಕ ಅನುಗ್ರಹಕ್ಕಾಗಿ ಯಾವುದೇ ದೇವತೆಗಳನ್ನು ಆರಾಧಿಸಬೇಕಾಗಿಲ್ಲ ಎಂದು ಪರಮಾತ್ಮನು ತನ್ನ ಈ ಲೀಲೆಯ ಮೂಲಕ ತಿಳಿಸಿದನು. ಈ ಘಟನೆಯನ್ನು ಗೋವರ್ಧನ ಲೀಲೆ ಎಂದು ಕರೆಯಲಾಗುತ್ತದೆ
ಕೃಷ್ಣನ ಸೂಚನೆಯಂತೆ ಮತ್ತು ವೃಂದಾವನದ ನಿವಾಸಿಗಳನ್ನು ಅನುಸರಿಸಿ, ಈ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಚರಿಸಲಾಗುತ್ತದೆ. ಭಕ್ತರು ಧಾನ್ಯ ಮತ್ತು ತುಪ್ಪದಿಂದ ಮತ್ತು ಹಾಗೂ ಎಲ್ಲ ರೀತಿಯ ಹಾಲಿನ ತಿನಿಸುಗಳಿಂದ ಆಹಾರವನ್ನು ಚಿಕ್ಕ ಬೆಟ್ಟದಂತೆ ಜೋಡಿಸಿ ಭಗವಂತನಿಗೆ ಅರ್ಪಿಸುತ್ತಾರೆ. ನಂತರ ಅದನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುತ್ತದೆ. ಹಾಗಾಗಿ ಈ ಹಬ್ಬವನ್ನು ಅನ್ನಕೂಟ ಹಬ್ಬ ಎಂದೂ ಕರೆಯುತ್ತಾರೆ. ಗೋವರ್ಧನ ಪೂಜೆಯ ದಿನವು ಭಕ್ತರು ಗೋವುಗಳನ್ನು ಪೂಜಿಸುತ್ತಾರೆ. ಕೃಷ್ಣನನ್ನು ಗೋಪಾಲ ಎಂದು ಕರೆಯಲಾಗುತ್ತದೆ. ಗೋಪಾಲ ಎಂದರೆ ಗೋವುಗಳ ರಕ್ಷಕ. ಹಸುಗಳನ್ನು ಅಲಂಕರಿಸಿ, ಉತ್ತಮ ಮೇವುಗಳಿಂದ ಸೇವಿಸಿ, ಗೋವುಗಳನ್ನು ಮುಂದಿಟ್ಟುಕೊಂಡು ಭಕ್ತರು ಗೋವರ್ಧನ ಬೆಟ್ಟಕ್ಕೆ ಪ್ರದಕ್ಷಿಣೆ ಹಾಕುತ್ತಾರೆ.
ಶ್ರೀ ಕೃಷ್ಣ ತನ್ನ ಎಡಗೈಯ ಕಿರುಬೆರಳಿನಲ್ಲಿ ಗೋವರ್ಧನ ಬೆಟ್ಟವನ್ನು ಹಿಡಿದಂತೆ ಕೃಷ್ಣ ಬಲರಾಮರನ್ನು ಗಿರಿಧಾರಿ ಅಲಂಕಾರದಲ್ಲಿ ಅಲಂಕರಿಸಲಾಗುತ್ತದೆ. ಇಸ್ಕಾನ್ ಬೆಂಗಳೂರಿನ ಭಕ್ತರು ಗೋವರ್ಧನ ಬೆಟ್ಟದ ಪ್ರತಿಕೃತಿಯನ್ನು 1000 ಕೆಜಿ ತೂಕದ ಸಸ್ಯಾಹಾರಿ ಕೇಕ್ಅನ್ನು ದೇವಸ್ಥಾನದ ಸ್ವಂತ ಬೇಕರಿಯಲ್ಲಿ ತಯಾರಿಸಲಾಗಿದೆ. ಗೋವರ್ಧನ ಕೇಕ್ ಅನ್ನು ಶ್ರೀ ಕೃಷ್ಣ ಬಲರಾಮ ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ನಂತರ ಎಲ್ಲಾ ಭಕ್ತರಿಗೆ ವಿತರಿಸಲಾಗುತ್ತದೆ. ಗೋವುಗಳನ್ನು ಚೆನ್ನಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಗುತ್ತದೆ. ಗೋವುಗಳ ರಕ್ಷಕ ಗೋಪಾಲನಿಗೆ ಆರತಿ ಮಾಡಲಾಗುತ್ತದೆ. ಭಕ್ತರು ಯಶೋಮತಿ ನಂದನದಂತಹ ವಿವಿಧ ಹಾಡುಗಳನ್ನು ಹಾಡುತ್ತಾರೆ. ಭಕ್ತರು ಶ್ರೀ ಗೋವರ್ಧನಾಷ್ಟಕಂ – ಗೋವರ್ಧನ ಬೆಟ್ಟವನ್ನು ವೈಭವೀಕರಿಸುವ ಎಂಟು ಪದ್ಯಗಳನ್ನು ಹಾಡುವಾಗ ಕೃಷ್ಣ ಬಲರಾಮನಿಗೆ ಭವ್ಯವಾದ ಆರತಿಯನ್ನು ಮಾಡಲಾಗುತ್ತದೆ. ದೀಪೋತ್ಸವದ ಆಚರೆಣೆ ಮೂಲಕ ಸಮಾಪ್ತಿಗೊಂಡಿತು.