Home Bengaluru ಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನ ಉದ್ಘಾಟನೆಭರವಸೆ ಮತ್ತು ಪಿತೃತ್ವದ ಹೊಸ ಉದಯ

ಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನ ಉದ್ಘಾಟನೆಭರವಸೆ ಮತ್ತು ಪಿತೃತ್ವದ ಹೊಸ ಉದಯ

ಅತ್ಯಾಧುನಿಕ ಕೇಂದ್ರವು ವೈಯಕ್ತೀಕರಿಸಿದ ಆರೈಕೆಯೊಂದಿಗೆ ವಿಶ್ವದರ್ಜೆಯ ಫರ್ಟಿಲಿಟಿ (ಫಲವತ್ತತೆ) ಚಿಕಿತ್ಸೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ

0

ಬೆಂಗಳೂರು, ಫೆಬ್ರವರಿ 16: ಸಮಗ್ರ ಹಾಗೂ ವಿಶೇಷ ಫಲವತ್ತತೆ(ಫರ್ಟಿಲಿಟಿ) ಆರೈಕೆ ಕೇಂದ್ರವಾದ ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನ ಉದ್ಘಾಟನೆಯು ಬೆಂಗಳೂರಿನಲ್ಲಿ ಇಂದು ಅದ್ಧೂರಿಯಾಗಿ ನೆರವೇರಿತು. 20 ವರ್ಷಗಳ ಅನುಭವ ಹೊಂದಿರುವ ಪ್ರಸಿದ್ಧ ಸಂತಾನೋತ್ಪತ್ತಿ ಚಿಕಿತ್ಸಾ ತಜ್ಞರಾದ ಡಾ. ರಶ್ಮಿ ಯೋಗೀಶ್ ಅವರು 2013ರಲ್ಲಿ ಸ್ಥಾಪಿಸಿದ ಈ ಕೇಂದ್ರವು ಬಹುವಿಭಾಗದ ವೃತ್ತಿಪರ ತಜ್ಞರ ತಂಡವನ್ನು ಒಂದೆಡೆ ಸೇರಿಸುತ್ತದೆ ಮತ್ತು ಎಲ್ಲಾ ಮಹತ್ವಾಕಾಂಕ್ಷೆಯ ಪೋಷಕರ ಪಾಲಿಗೆ ಪರಿಹಾರ ಕೇಂದ್ರವಾಗುವ ಗುರಿಯನ್ನು ಹೊಂದಿದೆ.

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಿಂದ ಈ ಕೇಂದ್ರವನ್ನು ಉದ್ಘಾಟಿಸಿಸಲಾಯಿತು. ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್ʼ ಬೆಂಗಳೂರಿನ ಜೆ.ಪಿ.ನಗರದ ಬನ್ನೇರುಘಟ್ಟ ರಸ್ತೆಯ 3ನೇ ಹಂತದಲ್ಲಿರುವ ವೆಗಾಸಿಟಿ ಮಾಲ್ ಎದುರು ಇದೆ. ಈ ಕೇಂದ್ರವು ರೋಗಿಗಳಿಗೆ ಅವರ ಸಮಸ್ಯೆಗಳ ಮೂಲ ಕಾರಣ ವಿಶ್ಲೇಷಣೆ ಮೂಲಕ ವೈಯಕ್ತೀಕರಿಸಿದ ಚಿಕಿತ್ಸೆಯನ್ನು ಒದಗಿಸುತ್ತದೆ. ಈ ಕೇಂದ್ರವು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಅತ್ಯಾಧುನಿಕ ʻಐವಿಎಫ್ʼ ಉಪಕರಣಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಿಶೇಷವೆನಿಸಿದೆ. ʻ3ಡಿ ಲ್ಯಾಪ್ರೋಸ್ಕೋಪಿʼ ʻಇಮ್ಯುನಾಲಜಿʼ ಮತ್ತು ʻಜೆನೆಟಿಕ್ಸ್ʼ ಜೊತೆಗೆ ನೈಸರ್ಗಿಕ ಫಲವತ್ತತೆ ಪರಿಹಾರಗಳನ್ನು ಗುರಿಯಾಗಿರಿಸಿಕೊಂಡು ಸಮಗ್ರ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುತ್ತದೆ.

ಅತ್ಯುತ್ತಮ ಫಲವತ್ತತೆ ತಜ್ಞರು, ಭ್ರೂಣಶಾಸ್ತ್ರಜ್ಞರು, ಮೂತ್ರ-ಪುರುಷತಜ್ಞರು(ಯುರೋ-ಆಂಡ್ರಾಲಜಿಸ್ಟ್), ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸಕರ ಜೊತೆಗೆ ತುರ್ತು ಆರೈಕೆ ಅರಿವಳಿಕೆ ತಜ್ಞರು ಹಾಗೂ ಅತ್ಯುತ್ತಮ ನುರಿತ ಸಹಾಯಕ ಸಿಬ್ಬಂದಿಯನ್ನು ಹೊಂದಿರುವ ಈ ಕೇಂದ್ರವು, ತರಬೇತಿ ನೀಡುವ ಸಂಸ್ಥೆಯಾಗುವ ಗುರಿಯನ್ನೂ ಹೊಂದಿದೆ. ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಈ ಕೇಂದ್ರವು ಸಂಪೂರ್ಣ ಸುಸಜ್ಜಿತ ತೀವ್ರ ನಿಗಾ ಘಟಕವನ್ನು (ಐಸಿಯು) ಸಹ ಹೊಂದಿದೆ.

ನ್ಯೂಯೋರ್ಕ್‌ನ ಸಿಲಿಕಾನ್ ವ್ಯಾಲಿಯ ಸಂಶೋಧನಾ ತಜ್ಞರ ಸಹಯೋಗದೊಂದಿಗೆ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಈ ಕೇಂದ್ರವು ಹೆಚ್ಚು ಮೆಚ್ಚುಗೆ ಪಡೆದಿದ್ದು, ʻಐ-ಗ್ರಂಥ’ ಅನ್ನು ರೂಪಿಸಿದೆ. ʻಐವಿಎಫ್ʼಗೆ ಸಹಾಯ ಮಾಡಲು ಅವರು ಒಟ್ಟಾಗಿ ʻಕ್ಯಾಪ್ಸುಲ್ ಐಯುಐʼ ಮತ್ತು ʻಐ-ಸಾಕ್ಷಿʼ ಎಂಬ ಹಲವಾರು ನವೀನ ತಂತ್ರಜ್ಞಾನಗಳನ್ನು ಆವಿಷ್ಕರಿಸಿದ್ದಾರೆ, ಚಿಕಿತ್ಸಾ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಇದನ್ನು ಸಹ ಇಂದು
ಅನಾವರಣಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಶ್ಮಿ ಯೋಗೀಶ್ ಅವರು, ದಂಪತಿಗಳು ತಮ್ಮ ಸಂತಾನದ ಕನಸನ್ನು ನನಸಾಗಿಸಿಕೊಳ್ಳಲು ಸಹಾಯ ಮಾಡುವ ಬದ್ಧತೆಯನ್ನು ವ್ಯಕ್ತಪಡಿಸಿದರು. “ಫಲವತ್ತತೆ ಆರೈಕೆಯಲ್ಲಿ ಉತ್ಕೃಷ್ಟತೆಯ ಕೇಂದ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಹೆಚ್ಚಿನ ವಯಸ್ಸು, ಜೀವನಶೈಲಿ ಬದಲಾವಣೆಗಳ ಜೊತೆಗೆ ʻಆಟೋ ಇಮ್ಯೂನ್‌ʼ ಮತ್ತು ಎಂಡೋಕ್ರೇನ್‌ ಸಮಸ್ಯೆಗಳ ಉಲ್ಬಣದಿಂದಾಗಿ ಇಂದಿನ ಪೀಳಿಗೆಯಲ್ಲಿ
ಫಲವತ್ತತೆ ಕಡಿಮೆಯಾಗುತ್ತಿದೆ. ಇದನ್ನು ಪರಿಗಣಿಸಿ ಸಮಗ್ರವಾದ ಮತ್ತು ಬಹುವಿಭಾಗೀಯ ಆರೈಕೆಗೆ ಬೇಡಿಕೆ ಹೆಚ್ಚಿದೆ. ಮಾನಸಿಕ ಮತ್ತು ಭಾವನಾತ್ಮಕ ಬೆಂಬಲವು ಸಹ ಇಂದಿನ ತುರ್ತು ಅಗತ್ಯವಾಗಿದೆ. ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼನಲ್ಲಿ, ಮಾನಸಿಕ ಮತ್ತು ಭಾವನಾತ್ಮಕ ಬೆಂಬಲಕ್ಕೆ ಹೆಚ್ಚಿನ ಒತ್ತು ನೀಡುವಂತಹ ರೋಗಿಗಳಿಗೆ ಅತ್ಯುತ್ತಮ ದರ್ಜೆಯ ಫಲವತ್ತತೆ ಚಿಕಿತ್ಸೆಯನ್ನು ನೀಡಲು ನಾವು ಸಂಕಲ್ಪ ಮಾಡಿದ್ದೇವೆ.
ಈ ಕ್ಷೇತ್ರದಲ್ಲಿ ನಮ್ಮ ದಶಕಗಳ ಅನುಭವವನ್ನು ಬಳಸುವ ಮೂಲಕ ಇದನ್ನು ಸಾಕಾರಗೊಳಿಸುವೆ,” ಎಂದು ಹೇಳಿದರು.

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಈ ಕೇಂದ್ರವು ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಫಲವತ್ತತೆ ಆರೈಕೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಿದರು. “ಫಲವತ್ತತೆ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸೇವೆ ಸಲ್ಲಿಸಲು ಬೆಂಗಳೂರಿನಲ್ಲಿ ಸುಸಜ್ಜಿತ ಕೇಂದ್ರ ಆರಂಭಗೊಂಡಿರುವುದು
ಸಂತೋಷದ ಸಂಗತಿ. ಇಂತಹ ಉದಾತ್ತ ಅನ್ವೇಷಣೆಯಲ್ಲಿ ತಮ್ಮ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದ್ದಕ್ಕಾಗಿ ಡಾ. ರಶ್ಮಿ ಯೋಗೀಶ್ ಅವರನ್ನು ನಾನು ಅಭಿನಂದಿಸಲು ಬಯಸುತ್ತೇನೆ,” ಎಂದು ಅವರು ಹೇಳಿದರು. ರೋಗಿ ಕೇಂದ್ರಿತ ಚಿಕಿತ್ಸಾ ವಿಧಾನ ಮತ್ತು ಸಮರ್ಪಿತ ತಜ್ಞರ ತಂಡದೊಂದಿಗೆ, ʻಖುಷಿ ಫರ್ಟಿಲಿಟಿ & ಐವಿಎಫ್ ಸೆಂಟರ್‌ʼ ಕರ್ನಾಟಕದಲ್ಲಿ ಫಲವತ್ತತೆ ಆರೈಕೆಯನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ.

Previous articleJoyalukkas Expands Presence in Bengaluru with the launch of HSR Showroom
Next articleಜೋಯಾಲುಕ್ಕಾಸ್‌ನ ಐಷಾರಾಮಿ ಹೊಸ ಶೋರೂಮ್‌ ಬೆಂಗಳೂರಿನ ಡಿಕೆನ್‌ಸನ್‌ ರಸ್ತೆಯಲ್ಲಿ ಪುನರಾರಂಭಿಸಿದೆ

LEAVE A REPLY

Please enter your comment!
Please enter your name here