Home Bengaluru ಕನ್ನಡ ಸುದ್ದಿ ವಾಹಿನಿಯೊಂದು ತನ್ನ ಮಾಜಿ ಉದ್ಯೋಗಿಗಳಿಗೆ ನ್ಯಾಯಯುತವಾಗಿ ನೀಡಬೇಕಾಗಿರುವ ಭವಿಷ್ಯ ನಿಧಿ ಕೊಡುವಲ್ಲಿ ವಂಚನೆ

ಕನ್ನಡ ಸುದ್ದಿ ವಾಹಿನಿಯೊಂದು ತನ್ನ ಮಾಜಿ ಉದ್ಯೋಗಿಗಳಿಗೆ ನ್ಯಾಯಯುತವಾಗಿ ನೀಡಬೇಕಾಗಿರುವ ಭವಿಷ್ಯ ನಿಧಿ ಕೊಡುವಲ್ಲಿ ವಂಚನೆ

0

ಬೆಂಗಳೂರು, ಅಕ್ಟೋಬರ್ 27: ಕನ್ನಡ ಸುದ್ದಿ ವಾಹಿನಿಯೊಂದು ತನ್ನ ಮಾಜಿ ಉದ್ಯೋಗಿಗಳಿಗೆ ನ್ಯಾಯಯುತವಾಗಿ ನೀಡಬೇಕಾಗಿರುವ ಭವಿಷ್ಯ ನಿಧಿ ಕೊಡುವಲ್ಲಿ ವಂಚನೆ ಮಾಡುತ್ತಿರುವ ಕುರಿತು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಥಿ ನಡೆಸಲಾಯಿತು.

ಈಗಲ್ ಸೈಟ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಈಗಲ್ ಸೈಟ್ ಟೆಲಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಡಿ ಕನ್ನಡ ಸುದ್ದಿ ವಾಹಿನಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಿದೆ. ಇದು ತನ್ನ ಸಂಸ್ಥೆಯಲ್ಲಿ ಕಾರ್ಯ ನಿರ್ವಯಿಸುತ್ತಿದ್ದ ಉದ್ಯೋಗಿಗಳಿಗೆ ಭವಿಷ್ಯ ನಿಧಿ ಕೊಡುವಲ್ಲಿ ವಂಚಿಸುತ್ತಿದೆ.

ಈ ಸಂಬಂಧ ಕೇಂದ್ರ ಭವಿಷ್ಯ ನಿಧಿಗೂ ದೂರು ನೀಡಲಾಗಿದೆ. ಅಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಪಿಎಫ್ ಹಣ ಕಟ್ಟಿಕೊಡುವಂತೆ ತೀರ್ಪು ನೀಡಲಾಗಿದೆ. ಆದರೂ ಮಾಜಿ ಉದ್ಯೋಗಿಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ.

ಈ ಸಂಬಂಧ ಕೇಂದ್ರ ಭವಿಷ್ಯ ನಿಧಿ ಕಚೇರಿ ಬಳಿ ಹೋದರೆ ನಮಗೆ ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ಮೇಲ್ ಗೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾ ಗೋಷ್ಥಿಯಲ್ಲಿ ವಂಚನೆಗೊಳಗಾಗಿರುವ ಉದ್ಯೋಗಿಗಳ ಪರವಾಗಿ ಶಿವಶಂಕರ್ – TUCC ಮತ್ತು ಸುಪ್ರೀತ್ ಮಾಜಿ ಉಧ್ಯೋಗಿ ಹೇಳಿದರು.

Previous articlePunam Chetry: Elevating Women’s Essence through Tycoon Global International Shoot Season-5
Next articleನಾಡಿನ ಹೆಮ್ಮೆಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಶತಮಾನೋತ್ಸವ

LEAVE A REPLY

Please enter your comment!
Please enter your name here