ಬೆಂಗಳೂರು ಡಿಸೆಂಬರ್ 6: ಆವಿಷ್ಕಾರಕ ದ್ರವ ನಿರ್ವಹಣಾ ಸೌಲಭ್ಯಗಳ ಮೂಲಕ ನೀರು ಮತ್ತು ವಿದ್ಯುತ್ತನ್ನು ಸುಲಭಲಭ್ಯವಾಗಿಸುವಲ್ಲಿ ಸಕ್ರಿಯವಾಗಿರುವ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಲಿಯಾಕ್ಸಿಸ್, ಅರವಿಂದ್ ಚಂದ್ರರನ್ನು ಕಾರ್ಯಕಾರಿ ಸಮಿತಿಗೆ ಸ್ವಾಗತಿಸಿದೆ. ಅಲಿಯಾಕ್ಸಿಸ್ ಇಂಡಿಯಾ ವಿಭಾಗೀಯ (ಆಶಿರ್ವಾದ್ ಪೈಪ್ಸ್, ) ಸಿಇಒ ಆಗಿ, ಅವರು ನೇರವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಓಲ್ಸೆನ್ ಅವರಿಗೆ ವರದಿ ಮಾಡಿಕೊಳ್ಳುತ್ತಾರೆ.
ಅಲಿಯಾಕ್ಸಿಸ್ ಸಿಇಒ ಎರಿಕ್ ಓಲ್ಸೆನ್, ” ನಮ್ಮ ಭಾರತೀಯ ವ್ಯವಹಾರದಲ್ಲಿನ, ಅರವಿಂದ್ ಚಂದ್ರ ಅವರ ಕ್ರಿಯಾಶೀಲ ನಾಯಕತ್ವದಲ್ಲಿ, ನಮ್ಮ ಮುಂದಿನ ಅಧ್ಯಾಯದ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಅರವಿಂದ್ ಅವರಿಗೆ 30 ವರ್ಷಗಳ ಜಾಗತಿಕ ಟ್ರ್ಯಾಕ್ ರೆಕಾರ್ಡ್ ಇದೆ; ವಿವಿಧ ಶ್ರೇಣಿಗಳ ಉದ್ಯಮಗಳಲ್ಲಿ ಲಾಭದಾಯಕತೆಯನ್ನು ಹೆಚ್ಚಿಸಿರುವ ಅನುಭವವಿದೆ. ಮುಂಬರುವ ವರ್ಷಗಳಲ್ಲಿ ಭಾರತ, ಅಲಿಯಾಕ್ಸಿಸ್ಗೆ ದೊಡ್ಡ ಮಾರುಕಟ್ಟೆಯಾಗಲಿದೆ ಮತ್ತು ಅದರ ಭಾರತೀಯ ವ್ಯವಹಾರಗಳನ್ನು ಮುಂದಿನ ಹಂತಕ್ಕೆ ಒಯ್ಯಲು ಅರವಿಂದ್ ಸಹಾಯ ಮಾಡುತ್ತಾರೆ.
ಇದಕ್ಕೆ ಪ್ರತಿಕ್ರಿಯಿಸುತ್ತ ಅಲಿಯಾಕ್ಸಿಸ್ ಇಂಡಿಯಾ ವಿಭಾಗೀಯ ಸಿಇಒ ಅರವಿಂದ್ ಚಂದ್ರ ಹೀಗೆ ಹೇಳಿದ್ದಾರೆ, “ಅಲಿಯಾಕ್ಸಿಸ್ ಭಾರತದಲ್ಲಿ ಎದುರಿಸುತ್ತಿರುವ ಕಠಿಣ ಸವಾಲುಗಳನ್ನು ಪರಿಹರಿಸಲು ಅವಕಾಶ ದೊರೆತಿದ್ದಕ್ಕೆ ನಾನು ಉತ್ಸುಕನಾಗಿದ್ದೇನೆ. ಆಶೀರ್ವಾದ್ ತಂಡದೊಂದಿಗೆ ನಾವು ಸುಸ್ಥಿರತೆ ಮತ್ತು ನಾವೀನ್ಯತೆ ಎರಡರ ಮೇಲೂ ಹೆಚ್ಚಿನ ಗಮನವನ್ನು ನೀಡುತ್ತೇವೆ, ಏಕೆಂದರೆ ನಾವು ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ನಮ್ಮ ಗ್ರಾಹಕರು ಭರವಸೆ ಇಟ್ಟುಕೊಂಡಿದ್ದಾರೆ.”
ಅರವಿಂದ್ ಚಂದ್ರ ಅವರು ಈ ಮೊದಲು ಆಟೋಮೋಟಿವ್ ವಲಯದ ಅತಿ ದೊಡ್ಡ ಸಂಸ್ಥೆಯಾದ ಮಿಂಡಾ ಕಾರ್ಪೊರೇಷನ್ನಲ್ಲಿ (NSE:MINDACORP) ಸಿಇಒ ಆಗಿದ್ದರು. ಅವರ ಅಧಿಕಾರಾವಧಿಯಲ್ಲಿ, ಕಂಪನಿ ಗಮನಾರ್ಹವಾದ ಮಾರಾಟ ಮತ್ತು ನಿವ್ವಳ ಲಾಭ ಬೆಳವಣಿಗೆಯೊಂದಿಗೆ ಶೇ.400+ ಸ್ಟಾಕ್ ಬೆಲೆಯ ಗಳಿಕೆಯನ್ನು ದಾಖಲಿಸಿತ್ತು.
ಅವರಿಗೆ 4 ಖಂಡಗಳಲ್ಲಿನ 8 ದೇಶಗಳಲ್ಲಿ, ಟೊಯೊಟಾ, ZF-ವಾಬ್ಕೋ, ಬೋರ್ಗ್ ವಾರ್ನರ್-ಫಿನಿಯಾ, ಫಾರ್ವಿಯಾ ನಂತಹ ವಿವಿಧ ಉನ್ನತ ತಂತ್ರಜ್ಞಾನ ಕಂಪನಿಗಳಲ್ಲಿ ಕಾರ್ಯತಂತ್ರದ, ಮಾರ್ಕೆಟಿಂಗ್, ಮಾರಾಟ, ಆರ್&ಡಿ, ಉತ್ಪಾದನೆ, ಗುಣಮಟ್ಟ ಮತ್ತು ಲಾಭ-ನಷ್ಟ… ಹೀಗೆ ಅನೇಕ ಬಗೆಯ ವಿಭಾಗಗಳಲ್ಲಿ 30+ ವರ್ಷಗಳ ಕೆಲಸ ಮಾಡಿರುವ ಅನುಭವವವಿದೆ. ಹಲವಾರು ಪರಿವರ್ತನ ಯೋಜನೆಗಳನ್ನು ಮುನ್ನಡೆಸಿದ್ದಾರೆ. ಈ ಅವಧಿಯಲ್ಲಿ ಅವರು ಬಿ2ಬಿ ಮತ್ತು ಬಿ2ಸಿ ಪರಿಸರದಲ್ಲಿ ಸಮಾಲೋಚಕರಾಗಿಯೂ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ಅರವಿಂದ್ ಅವರು ಮುಂಬೈ ವಿಶ್ವವಿದ್ಯಾನಿಲಯದಿಂದ ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ಬಿಎಸ್ ಪದವಿ, ಒಕ್ಲಾಹಾಮ ಸ್ಟೇಟ್ ಯೂನಿವರ್ಸಿಟಿಯಿಂದ ಇಂಡಸ್ಟ್ರಿಯಲ್ ಇಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಮತ್ತು ಯುಎಸ್ಎ ಮಿಚಿಗನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಗಳಿಸಿದ್ದಾರೆ.