Home Tourism ಅಭೂತಪೂರ್ವ ಪ್ರತಿಕ್ರಿಯೆಯೊಂದಿಗೆ ಬೆಂಗಳೂರಿನಲ್ಲಿ ಇಂದು ಟಿಟಿಎಫ್ 2024(TTF 2024) ಆರಂಭ

ಅಭೂತಪೂರ್ವ ಪ್ರತಿಕ್ರಿಯೆಯೊಂದಿಗೆ ಬೆಂಗಳೂರಿನಲ್ಲಿ ಇಂದು ಟಿಟಿಎಫ್ 2024(TTF 2024) ಆರಂಭ

0

ಬೆಂಗಳೂರು, ಫೆಬ್ರವರಿ 18: ಭಾರತದ ಅತ್ಯಂತ ಹಳೆಯ ಮತ್ತು ಅತಿ ದೊಡ್ಡ ಪ್ರವಾಸ ಪ್ರದರ್ಶನ ಸಂಪರ್ಕಜಾಲವಾದ ಪ್ರವಾಸ ಮತ್ತು ಪ್ರವಾಸೋದ್ಯಮ ಮೇಳ (TTF) ಇಂದು ವೈವಿಧ್ಯಮಯ ರಾಜ್ಯವಾದ ಕರ್ನಾಟಕದ ಬೆಂಗಳೂರಿನಲ್ಲಿ ಆರಂಭಗೊಂಡಿರುವುದು ಹೆಮ್ಮೆಯ ಮತ್ತು ಸಂತೋಷದ ವಿಷಯ.


ಬೆಂಗಳೂರಿನ ಅರಮನೆ ಮೈದಾನದಲ್ಲಿ ಟಿಟಿಎಫ್ ಬೆಂಗಳೂರು 2024 ಇಂದು ಫೆಬ್ರವರಿ 16ರಂದು ಆರಂಭವಾಗಿ ಫೆಬ್ರವರಿ 18ರವರೆಗೆ ಮುಂದುವರಿಯಲಿದೆ. ಪ್ರವಾಸ ಮತ್ತು ಪ್ರವಾಸೋದ್ಯಮ ಅನುಭವಗಳ ಶ್ರೀಮಂತಿಕೆ ಮತ್ತು ವೈವಿಧ್ಯತೆಯ ಸಾಟಿಯಿಲ್ಲದ ಪ್ರದರ್ಶನಕ್ಕೆ ವೇದಿಕೆಯನ್ನು ಇದು ವೇದಿಕೆ ನಿರ್ಮಿಸುತ್ತಿದೆ. ಇದು ಭಾರತ ಮತ್ತು ಪ್ರಪಂಚದಾದ್ಯಂತ ಪ್ರದರ್ಶಕರ ಆಯ್ಕೆಯನ್ನು ಒಳಗೊಂಡಿದ.


ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ. ಸಲ್ಮಾ ಕೆ.ಫಾಹಿಮ್, ಐಎಎಸ್, ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಡಾ.ರಾಮ್ ಪ್ರಸಾತ್ ಮನೋಹರ್, ಐಎಎಸ್, ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ. ಮತ್ತು ಶ್ರೀ. ಮೊಹಮ್ಮದ್ ಫಾರೂಕ್, ನಿರ್ದೇಶಕರು, ಭಾರತ ಪ್ರವಾಸೋದ್ಯಮ, ಪ್ರವಾಸೋದ್ಯಮ ಸಚಿವಾಲಯ – ಬೆಂಗಳೂರು ಹಾಗೂ ಪ್ರವಾಸೋದ್ಯಮದ ಇತರ ಪ್ರಮುಖ ನಾಯಕರು ಮತ್ತು ಗಣ್ಯರು ಭಾಗವಹಿಸಿದ್ದರು.
ಟಿಟಿಎಫ್ ಬೆಂಗಳೂರು 2024 ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಬ್ರ್ಯಾಂಡ್ ಗಳು ಸೇರಿದಂತೆ 100 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಟ್ಟುಗೂಡಿಸಿದೆ, ಉದ್ಯಮದ ವೃತ್ತಿಪರರು ಮತ್ತು ಪ್ರಯಾಣ, ಪ್ರವಾಸೋದ್ಯಮ ಉತ್ಸಾಹಿಗಳೊಂದಿಗೆ ಸಂಪರ್ಕ ಸಾಧಿಸಲು ಈ ಮೇಳ ಉತ್ಸುಕವಾಗಿದೆ. ಒಟ್ಟಾರೆ ಮೂರು ದಿನಗಳ ಮೇಳದಲ್ಲಿ ಮೊದಲ ಒಂದೂವರೆ ದಿನ ಬಿ2ಬಿ ಸಂಪರ್ಕಜಾಲ ಸೆಷನ್‌ಗಳನ್ನು ಒಳಗೊಂಡಿರುತ್ತದೆ. ನಂತರ 1.5 ದಿನಗಳು ಬಿ2ಬಿ ಮತ್ತು ಬಿ2ಸಿ ಸಂದರ್ಶಕರಿಗೆ ತೆರೆದಿರುತ್ತದೆ. ರಜಾದಿನಗಳ ಪ್ರವಾಸಿ ಸ್ಥಳಗಳಿಗೆ ಹೋಗುವವರಿಗೆ ಅತ್ಯುತ್ತಮ ಸ್ಥಳಗಳನ್ನು ಕಂಡುಹಿಡಿಯಲು ಸಂಪರ್ಕಜಾಲ, ಸಹಯೋಗ ಮತ್ತು ಅನ್ವೇಷಣೆಗಾಗಿ ಅನನ್ಯ ವೇದಿಕೆಯನ್ನು ಒದಗಿಸುತ್ತದೆ.


ನಾವೀನ್ಯತೆ ಮತ್ತು ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿರುವ ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ಬೆಂಗಳೂರು, ಭಾರತದ ಪ್ರವಾಸೋದ್ಯಮ ವಲಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಇಲ್ಲಿನ ಸಂಸ್ಕೃತಿ, ತಂತ್ರಜ್ಞಾನ ಮತ್ತು ನೈಸರ್ಗಿಕ ಸೌಂದರ್ಯಗಳು ಮಿಳಿತಗೊಂಡು, ನಗರವು ಟಿಟಿಎಫ್ ಬೆಂಗಳೂರು ಮೇಳಕ್ಕೆ ಸೂಕ್ತ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ. ಅತಿದೊಡ್ಡ ಪ್ರವಾಸೋದ್ಯಮ ಪ್ರದರ್ಶನ ಮೇಳವಾಗಿರುತ್ತದೆ.


ಮುಂಬರುವ ಬೇಸಿಗೆ ರಜೆಯ ಪ್ರವಾಸ ಸಮಯದಲ್ಲಿ ಈ ಮೇಳ ನಡೆಯುತ್ತಿರುವುದು ಹಲವರಿಗೆ ಪ್ರಯೋಜನವಾಗಲಿದೆ. ಟಿಟಿಎಫ್ ಬೆಂಗಳೂರಿನ ಆತಿಥೇಯ ರಾಜ್ಯವಾದ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು ಈ ಕಾರ್ಯಕ್ರಮಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದು, 38 ಸಹ-ಭಾಗಿಗಳು ಕೈಜೋಡಿಸಿವೆ. ಪ್ರದರ್ಶನದಲ್ಲಿ ತನ್ನ ಹೇರಳವಾದ ಕೊಡುಗೆಗಳನ್ನು ಪ್ರದರ್ಶಿಸಲು ಕರ್ನಾಟಕ ರಾಜ್ಯಕ್ಕೆ ಒಂದು ಪ್ರಧಾನ ವೇದಿಕೆಯಾಗಿ ಈ ಮೇಳ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ರಾಜ್ಯದೊಳಗೆ ಗಮನಾರ್ಹ 300ಕ್ಕೂ ಹೆಚ್ಚು ಪ್ರಮುಖ ಪ್ರವಾಸಿ ತಾಣಗಳಿದ್ದು, ಭಾರತದಲ್ಲಿ ಕರ್ನಾಟಕವು ನಾಲ್ಕನೇ ಅತಿ ಹೆಚ್ಚು ಪ್ರವಾಸಿ ತಾಣ ಹೊಂದಿರುವ ರಾಜ್ಯವಾಗಿದೆ.


ಒಡಿಶಾ, ಗುಜರಾತ್, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನಂತಹ ಇತರ ರಾಜ್ಯಗಳು ಸಹ ಪ್ರವಾಸೋದ್ಯಮದಲ್ಲಿ ಪ್ರವಾಸಿ ಪ್ರಿಯರನ್ನು ಆಕರ್ಷಿಸುತ್ತಿವೆ. ಖಾಸಗಿ ಹೋಟೆಲ್‌ಗಳು ಮತ್ತು ಪ್ರವಾಸ ನಿರ್ವಾಹಕರು ಮೇಳದಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ, ಲಡಾಖ್, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಭಾರತದ ವಿವಿಧ ರಾಜ್ಯಗಳ ಖಾಸಗಿ ಮಧ್ಯಸ್ಥಗಾರರು ಭಾಗವಹಿಸುತ್ತಿದ್ದಾರೆ.


ಭೂತಾನ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್, ಯುಎಇ ಮತ್ತು ಯುಎಸ್ಎ ದೇಶಗಳನ್ನು ಈ ಪ್ರದರ್ಶನದಲ್ಲಿ ಖಾಸಗಿ ಪ್ರದರ್ಶಕರು ಪ್ರತಿನಿಧಿಸುತ್ತಿದ್ದಾರೆ. ಪ್ರದರ್ಶಕರು ಟ್ರಾವೆಲ್ ಏಜೆಂಟ್‌ಗಳು, ಟೂರ್ ಆಪರೇಟರ್‌ಗಳು, ಆತಿಥ್ಯ ನೀಡುವ ಕೇಂದ್ರಗಳು, ಪ್ರವಾಸಿ ತಾಣಗಳಿಗೆ ತಲುಪುವ ಜಾಗಗಳ ನಿರ್ವಹಣಾ ಕಂಪನಿಗಳು (DMC) ಹೀಗೆ ವೈವಿಧ್ಯಮಯ ವ್ಯವಹಾರಗಳನ್ನು ನಡೆಸುವವರು ಪ್ರತಿನಿಧಿಸುತ್ತಾರೆ.


”ಕಳೆದ ವಾರ ಮುಂಬೈನಲ್ಲಿ ನಡೆದ ಔಟ್ ಬೌಂಡ್ ಟ್ರಾವೆಲ್ ಮಾರ್ಟ್(OTM) ನಂತರ ಟಿಟಿಎಫ್ ಬೆಂಗಳೂರು 2024 ರಲ್ಲಿ ಈಗಾಗಲೇ ಬಂದಿರುವ ಪ್ರತಿಕ್ರಿಯೆಗಳನ್ನು ಕಂಡು ನಾವು ಸಂತಸಗೊಂಡಿದ್ದೇವೆ. ಈ ಪ್ರದರ್ಶನವು ಪ್ರವಾಸದ ಸಂತಸವನ್ನು ಆಚರಿಸುತ್ತದೆ ಮತ್ತು ವಿವಿಧ ರಾಜ್ಯಗಳು ಮತ್ತು ದೇಶಗಳ ನಡುವೆ ಸಂಪರ್ಕವನ್ನು ಬೆಳೆಸುತ್ತದೆ” ಎಂದು ಈ ಪ್ರದರ್ಶನ ಮೇಳದ ಸಂಘಟಕರಾದ ಫೇರ್‌ಫೆಸ್ಟ್ ಮೀಡಿಯಾ ಲಿಮಿಟೆಡ್‌ ಅಧ್ಯಕ್ಷ ಮತ್ತು ಸಿಇಒ ಸಂಜೀವ್ ಅಗರ್ವಾಲ್ ಹೇಳಿದ್ದಾರೆ.


ಈ ವರ್ಷದ ಟಿಟಿಎಫ್ ಪ್ರವಾಸೋದ್ಯಮದ ಅತ್ಯುತ್ತಮ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ಪ್ರಸ್ತುತ ಜಾಗತಿಕ ಆರ್ಥಿಕತೆ ಮತ್ತು ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಭಾರತ ಪ್ರಮುಖ ದೇಶವಾಗಿದ್ದು, ಭಾರತೀಯ ಪ್ರವಾಸಿಗರನ್ನು ದೇಶ-ವಿದೇಶದ ಸ್ಥಳಗಳಿಗೆ ಕೈಬೀಸಿ ಕರೆಯುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮ ಹೊಸ ಮತ್ತು ಈಗಾಗಲೇ ಇರುವ ಪ್ರತಿಷ್ಠಿತ ಪ್ರವಾಸೋದ್ಯಮ ಸಂಸ್ಥೆಗಳ ಮಧ್ಯೆ ಸಂಪರ್ಕ-ಸ್ನೇಹ-ಭಾತೃತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮುಂದಿನ ಮೂರು ದಿನಗಳಲ್ಲಿ ಪ್ರವಾಸೋದ್ಯಮದಿಂದ ಗಣನೀಯ ಪ್ರಮಾಣದ ಆದಾಯ ಉದ್ಯಮ ನಿರೀಕ್ಷಿಸಲಾಗಿದೆ.

Previous articleRelanto Announces Strategic Global Expansion and Launch of Relanto Cares Initiative
Next articleಸರ್ಕಾರಿ ನೌಕರರನ್ನು ಹಂತ ಹಂತವಾಗಿ ಖಾಯಂ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡ ರಾಜ್ಯ ಸರ್ಕಾರಕ್ಕೆ ಎಲ್ಲಾ ಸರ್ಕಾರಿ ನೌಕರರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.

LEAVE A REPLY

Please enter your comment!
Please enter your name here